Select to view pages |
|
|
|
|
|
|
|
|
|
|
|
|
|
|
|
|
|
|
|
|
ಗೆಳೆಯರೇ,
ನಾನು ಬರೆದ ಅಂಕಣಗಳು ಕನ್ನಡ ದಿನಪತ್ರಿಕೆಯಾದ ಸಂಯುಕ್ತ ಕರ್ಣಾಟಕದಲ್ಲಿ ಪ್ರಕಟನೆಗೊಂಡಿವೆ
ಆಯ್ದ ಅಂಕಣಗಳನ್ನು ಮಾತ್ರ ಇಲ್ಲಿ ಬಿಂಬಿಸಿರುವೆ
ಹೊಡೆವ ಬದಲು ಬುದ್ದಿ ಹೇಳಿ !
ಸಂಯುಕ್ತ ಕರ್ಣಾಟಕ ದಿನಪತ್ರಿಕೆಯಲ್ಲಿ ೦೩.೦೧.೨೦೦೩ ರಂದು ಪ್ರಕಟವಾದ ಅಂಕಣವಿದು. ಮೇಲಿನ ಮಾತನ್ನು
ಹೇಳಿದವರು ಪ್ರಖ್ಯಾತ ಕನ್ನಡ ಚಿತ್ರತಾರೆ ಸಾಹಸ ಸಿಂಹ ಡಾ.ವಿಷ್ಣುವರ್ಧನ್ !
ಅಂತೂ ಅವರ ಸಾಹಸವನ್ನು ತೋರಿಸಿಬಿಟ್ಟರು. ಉದಯ ಟಿ.ವಿ ಯಲ್ಲಿ ರಾತ್ರಿ ೯.೦೦ ಗಂಟೆಗೆ ಪ್ರಸಾರವಾಗುವ ಫಣಿ ರಾಮಚಂದ್ರ ನಿರ್ದೇಶನದ " ದರಿದ್ರ ಲಕ್ಷ್ಮಿಯರು " ಧಾರಾವಾಹಿ ನೋಡಿದವರಿಗೆ ಮೇಲಿನ ಮಾತು ಚೆನ್ನಾಗಿ ಅರ್ಥವಾಗುತ್ತದೆ.
ಫಣಿ ರಾಮಚಂದ್ರರವರು ಒಂದು ಕೊಠಡಿಯಲ್ಲಿ ಕುಳಿತೂಕೊಂಡು "ದರಿದ್ರ ಲಕ್ಷ್ಮಿಯರು "ಧಾರಾವಾಹಿಯ ಕಥೆಯನ್ನು
ಬರೆದಿದ್ದಾರೆ ವಿನ: ಹೊರಗಿನ ಆಗುಹೋಗುಗಳನ್ನು ತಿಳಿದುಕೊಂಡಿಲ್ಲ ಅನ್ನಿಸುತ್ತದೆ. ಈಗಿನ ಕಾಲದಲ್ಲಿ ಹೆಣ್ಣನ್ನು ಫಣಿ ರಾಮಚಂದ್ರರವರು ನಿರ್ದೇಶಿಸಿದ ಹಾಗೇ ಅವಮಾನಿಸಲಾಗುವುದಿಲ್ಲ. ನಿಜ ಹೇಳಬೆಕೇಂದರೆ ಈ ಧಾರಾವಾಹಿಯಲ್ಲಿ ಹೆಣ್ಣಿನ ಕುಲಕ್ಕೆ ಅವಮಾನವಾಗಿದೆ. ನನಗೆ ಗೊತ್ತು ಫಣಿ ಅವರು ಮುಂದೆ ಈ ಧಾರಾವಾಹಿಯಲ್ಲಿ ಹೆಣ್ಣನ್ನು ದೇವತೆಯಾಗಿ
ಅಥವಾ ಅವಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತಾರೆಂದು ಆದರೆ ಈಗ ನಡೆಯುತ್ತಿರುವ ಧಾರಾವಾಹಿಯಲ್ಲಿ ಹೆಣ್ಣನ್ನು
ಅಪಾರವಾಗಿ ಅವಮಾನ ಮಾಡಲಾಗಿದೆ. ಈ ಮೊದಲು " ದಂಡ ಪಿಂಡಗಳು " ಮತ್ತು " ಪ್ರೇಮ ಪಿಶಾಚಿಗಳು " ಧಾರಾವಾಹಿಯಲ್ಲಿ ಮೊದ ಮೊದಲು ಟೀಕೆಗೆ ಒಳಗಾಗಿದ್ದ ಫಣಿ ಅವರು ನಂತರ ಪ್ರಂಶಸೆಗೆ ಅರ್ಹರಾದದ್ದು ನಿಜ ಆದರೆ ಆ ಕಥೆಗಳಲ್ಲಿ ಸಾಕಷ್ಟು ನಿಜಾಂಶವಿತ್ತು. ಆದರೆ " ದರಿದ್ರ ಲಕ್ಷ್ಮಿಯರು "ಧಾರಾವಾಹಿಯಲ್ಲಿ ಅಂತಹುದೆನು ಕಂಡುಬರುತ್ತಿಲ್ಲ.
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ! ಅವರಿಗೆ ಈ ದಿನಪತ್ರಿಕೆಯ ಮೂಲಕ ತಿಳಿಸುವುದೆನೆಂದರೆ ಫಣಿ ಸಿಕ್ಕರೆ ಹೋಡಿಬೇಡಿ, ಅವರಿಗೆ ಬುದ್ದಿ ಮಾತು ಹೇಳಿ. ಎಷ್ಟಾದರು ತಾವು ದೊಡ್ಡವರು ಅಲ್ಲದೇ ಖ್ಯಾತ ತಾರೆ.
ಗಿರೀಶ ಅವಟೆ, ನಣದಿ, ತಾ.ಚಿಕ್ಕೋಡಿ ಜಿಲ್ಲೆ : ಬೆಳಗಾವಿ
ಪ್ರಕಟನೆಗೊಂಡ ವರುಷ : ೨೦೦೩ ಸಂಯುಕ್ತ ಕರ್ಣಾಟಕ
ಪಿ.ಯು.ಸಿ ಫೇಲಾಗುವದಕ್ಕೆ ವಿದ್ಯಾರ್ಥಿಗಳೇ ಕಾರಣ
"ದ್ವಿತೀಯ ಪಿ.ಯು.ಸಿ ಫ಼ಲಿತಾಂಶವು ಇಳಿಮುಖವಾಗಲು ವಿದ್ಯಾರ್ಥಿಗಳೇ ಕಾರಣ,
ಏಕೆಂದರೆ ಇವರು ಚೆನ್ನಾಗಿ ಅಭ್ಯಾಸ ಮಾಡೋಲ್ಲ ಮತ್ತು ಅತ್ತಿಂದಿತ್ತ ತಿರುಗಾಡುವದು ಇವರ ಕೆಲಸ. ನಾನು ದ್ವಿತೀಯ ಪಿ.ಯು.ಸಿಗೆ ಕಾಲಿಟ್ಟ ವಿದ್ಯಾರ್ಥಿಯಾಗಿರುವೆ. ನಾನು ಈ ವಿದ್ಯಾರ್ಥಿಗಳ ಅನುಭವವನ್ನು ಕಂಡೆ ಅದೇನೆಂದರೆ, ಇವರು ಕಾಲೇಜ಼ಿಗೆ ಹೋಗುವದು ಮುಂಜಾನೆಯ ಮೊದಲ ಬಸ್ಸಿಗೆ ಮತ್ತು ಹಿಂತಿರುಗಿ ಬರುವದು ರಾತ್ರಿ ಕೊನೆಯ ಬಸ್ಸಿಗೆ, ದಿನವೀಡಿ ಹರಟೆ ಹೋಡಿಯುತ್ತ ಅತ್ತಿಂದಿತ್ತ ತಿರುಗಾಡುವವರಿಗೆ, ಮತ್ತೆ ನಾನೇಕೆ ಫ಼ೇಲಾದೆ ಎಂಬ ಕಾರಣ ಬೆರೆ ಕಾಣಬೆಕೇ?
" ಪಾಲಕರು ಮತ್ತು ಅಧ್ಯಾಪಕರು ಇದಕ್ಕೆ ಕಾರಣವಲ್ಲ. ನಾನು ದಿನಾಲು ದಿನಪತ್ರಿಕೆಯಲ್ಲಿ ನೋಡುತ್ತಿರುವ ಅಂಶವೇಂದರೆ, " ಪಿ.ಯು.ಸಿ. ಪರೀಕ್ಷೆ ಇಡಿ " ಈ ಪಿ.ಯು.ಸಿ ಪರೀಕ್ಷೆ
ಮತ್ತೊಮ್ಮೆ ಇಡಬಾರದು ಎಂಬ ನನ್ನ ಅನಿಸಿಕೆ ಎಸ್ಸ್ ಎಸ್ಸ್ ಎಲ್ ಸಿ ಅವರಿಗೆ ಸಪ್ಲಿಮೆಂಟರಿ ಪರೀಕ್ಷೆ ಇಟ್ಟಬಳಿಕ ಪಿ.ಯು.ಸಿ ಅವರು ಸಹ ಸಪ್ಲಿಮೆಂಟರಿ ಪರೀಕ್ಷೆ ಇಡಿ ಎಂದ ಬಳಿಕ, ಡಿಗ್ರಿಯವರು ಏಕೆ ಮುಂದೆ ಹೀಗನ್ನಬಾರದು ?
ಗಿರೀಶ ಅವಟೆ, ನಣದಿ, ತಾ.ಚಿಕ್ಕೋಡಿ ಜಿಲ್ಲೆ : ಬೆಳಗಾವಿ
ಪ್ರಕಟನೆಗೊಂಡ ವರುಷ : ೨೦೦೧ ಸಂಯುಕ್ತ ಕರ್ಣಾಟಕ
ನಿಸಾರ ಲೇಖನ ಚೆನ್ನಾಗಿತ್ತು
ಕಳೆದ ಸಲದ ಕ್ರೀಡಾಲೋಕ ಸಂಚಿಕೆಯಲ್ಲಿ ಮಹಮ್ಮದ ನಿಸಾರ ಅವರ ಕುರಿತ ಲೇಖನ ಚೆನ್ನಾಗಿತ್ತು.
ನಿಸಾರ ಅವರಂಥ ಬೌಲರಗಳು ಪ್ರಸ್ತುತ ಭಾರತ ತಂಡದಲ್ಲಿದ್ದಿದ್ದರೇ ಭಾರತ ಅನೇಕ ಪಂದ್ಯಗಳನ್ನು ಗೆಲ್ಲುತ್ತಿತ್ತು. ನಿಸಾರ ಅವರನ್ನು ಹೊಲುವ ಬೌಲರಗಳಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿ
ಏಂದು ಹಾರೈಸುವ
ಗಿರೀಶ ಅವಟೆ, ನಣದಿ, ತಾ.ಚಿಕ್ಕೋಡಿ ಜಿಲ್ಲೆ : ಬೆಳಗಾವಿ
ಪ್ರಕಟನೆಗೊಂಡ ವರುಷ : ೧೯೯೭ ಸಂಯುಕ್ತ ಕರ್ಣಾಟಕ
|
|
|
|
|
|
|
Today, there have been 9 visitors (11 hits) on this page! |
|
|
|
|
|
|
|